ಪ್ರತಿ ತಿಂಗಳು ಕೇಂದ್ರದಲ್ಲಿ ಮಿನಿ ಉದ್ಯೋಗ ಮೇಳಗಳನ್ನು ಹಾಗೂ ಪ್ರತಿ ತ್ರೈಮಾಸಿಕ ದೊಡ್ಡ ಉದ್ಯೋಗಮೇಳವನ್ನು ಆಯೋಜನೆ ಮಾಡಿ ಅರ್ಹ ಉದ್ಯೋಗಾರ್ಥಿಗಳನ್ನು ಒದಗಿಸಲಾಗುವುದು . ಈ ಉದ್ದೇಶಕ್ಕಾಗಿ ಉದ್ಯೋಗದಾತರನ್ನು ಇ-ಮೇಲ್/ದೂರವಾಣಿ / ಕುದ್ದು ಭೇಟಿ ಮುಖಾಂತರ ಸಂಪರ್ಕಿಸಲಾಗುವುದು. ಉದ್ಯೋಗ ಮೇಳದಲ್ಲಿ ಪ್ರತಿ ಉದ್ಯೋಗದಾತರುಗಳಿಗೆ ಸಂದರ್ಶನ ನಡೆಸಲು ಮತ್ತು ಲಿಖಿತ ಪರೀಕ್ಷೆ ನಡೆಸಲು ಎಲ್ಲ ಅನಕೂಲತೆಗಳನ್ನು ಮಾಡಿಕೊಡಲಾಗುವುದು . ಈ ಸೇವೆಯು ಸಹ ಉಚಿತವಾಗಿರುತ್ತದೆ. ನೇಮಕಾತಿ ಪ್ರಕ್ರಿಯೆ ನಂತರ ಫಲಿತಾಂಶ ಒದಗಿಸುವುದು ಖಡ್ದಾಯ.